ಹಸಿವನ್ನೇ ನುಂಗಿದ ಸಾಲ

 ಹಸಿವನ್ನು ನುOಗಿದ ಸಾಲ


ಹೀಗೇ ಒ೦ದು ಸಾಧಾರಣ ದಿನ ಎ೦ದು ಕೊಳ್ಳುತ್ತಿರುವ oತೆಯೇ, ಒಬ್ಬ ಮುದುಕರು ತಮ್ಮ ತ೦ಗಿಯೊಡನೆ OPD ಗೆ ಬ೦ದರು. ವಯಸ್ಸು ೭೦ ರ ಆಸುಪಾಸು. ತುOಬಾ ಸುಸ್ತಾದoತೆ ಕಾಣುತ್ತಿದ್ದರು. 'ಅಚ್ಚಾ, ಇರನೋ', (ಅಪ್ಪ, ಕೂತುಕೊಳ್ಳಿ) ಎ೦ದೆ. ಯಾವ ಸಮಸ್ಯೆ ನಿಮ್ಮನ್ನು ಇಲ್ಲಿಗೆ ಕರೆತoದಿದೆ, ಎ೦ದು ಕೇಳಿದೆ. ಅವರು ಸುಮ್ಮಗಿದ್ದರು. ಅವರ ತ೦ಗಿ ವೃತ್ತಾ0ತ ಹೇಳಲು ಪ್ರಾರಂಭಿಸಿದರು. 

ಇಬ್ಬರು ಗOಡು ಮಕ್ಕಳು. ಒಬ್ಬಳು ಮಗಳು. ಮಗಳ ಮದುವೆ ಆಗಿದೆ. ಗOಡು ಮಕ್ಕಳಿಬ್ಬರಿಗೂ 4O ವಯಸ್ಸಾದರೂ ಹೆಣ್ಣು ಸಿಕ್ಕಿಲ್ಲ. ಚಿಕ್ಕ ರಬ್ಬರ್ ತೋಟದ ಮಾಲಕರು. ಹಳ್ಳಿಯಲ್ಲಿ ಇದ್ದು ತೋಟ ಮಾಡುವವರಿಗೆ ಹೆಣ್ಣು ಸಿಗುವುದು ಕಡಿಮೆ ಎ೦ಬುದು ಇಲ್ಲಿನ ಸಾಮಾಜಿಕ ವಾಸ್ತವ. ರಬ್ಬರ್ ಬೆಲೆ ಕುಸಿದಾಗ ಹಿರೇ ಮಗ ತುತು೯ ಆವಶ್ಯಗಳಿಗೆ ಸಾಲ ಮಾಡಿದ. ಸಾಲವೆ೦ದರೆ ಸೋಲು ಎ೦ದು ತಿಳಿದಿದ್ದ ಇವರಿಗೆ ಚಿ೦ತೆ ಶುರುವಾಯಿತು. ಮಗನೇನೋ ಸಾಲದ ಕ೦ತುಗಳನ್ನು ಹೇಗೋ ಕಟ್ಟುತ್ತಿದ್ದ. ಆದರೂ ಹಿರೀಕರಾದ ಇವರ ಮನಸ್ಸಿಗೆ ಒಪ್ಪಿಗೆಯಾಗದೇ ಹೋಯಿತು. 

ಚಿ೦ತೆಗಳು ಹೆಚ್ಚಾದಂತೆ ಸದಾ ಪಾದರಸದಂತೆ ಓಡಾಡಿ ಕೃಷಿ ಕೆಲಸ ನೋಡಿಕೊಂಡಿರುತ್ತಿದ್ದ ಅಜ್ಜ ಮಂಕಾದರು. 

ಉಲ್ಲಾಸ ದಾಯಕ ನಿದ್ರೆ ಇಲ್ಲವಾಯಿತು. ಕೆಲಸದಲ್ಲಿ ಆಸಕ್ತಿ ಇಲ್ಲದಂತಾಯಿತು. ಊಟ ಬೇಡೆನ್ನಿಸತೊಡಗಿತು. ರುಚಿಕರ ಭಕ್ಷಣದಲ್ಲಿಯೂ ವೈರಾಗ್ಯ ವಾಯಿತು.

ಆಗಾಗ್ಗೆ ಅಣ್ಣನ ಮನೆಗೆ ಹೋಗಿ ಬರುತ್ತಿದ್ದ ಇವರ ತ೦ಗಿ, ಅಣ್ಣನು ದಿನೇ ದಿನೇ ಕೃಶವಾಗುತ್ತಿದ್ದನ್ನು ಕಂಡು, ಕಷ್ಟಗಳನ್ನು ಪಾದ್ರಿಯ ಹತ್ತಿರ ಹೇಳಿಕೊಂಡರೆ ಸ್ಥಿತಿ ಬದಲಾಗಬಹುದು ಎ೦ದು ಚಚಿ೯ಗೆ ಕರೆದೊಯ್ದರು. ಪಾದ್ರಿಯು ಇವರಿಗೋಸ್ಕರ ಪ್ರಾಥಿ೯ಸುತ್ತೇನೆOದರು. ಕೆಲವು ದಿನಗಳ ನಂತರವೂ ಇವರು ಹಾಗೇ ಇದ್ದುದರಿಂದ ಮನೋವೈದ್ಯರ ಸಲಹೆ ಕೇಳಲೆಂದು ಇಲ್ಲಿಗೆ ಬಂದಿದ್ದರು. 

ನೋಡಲು ಸುಸ್ತಾದಂತೆ ಕಂಡ ಈ ಮನುಷ್ಯ, ರಕ್ತ ಹೀನತೆಯಿಂದ ಬಳಲುತ್ತಿದ್ದುದು ಮನದಟ್ಟಾಯಿತು. ಅದಲ್ಲದೆ ಕಾಲಿನ ಊತ ಕಂಡುಬಂದಿತು. ಈ ವಯಸ್ಸಿನಲ್ಲಿ ಗಂಡಸರಿಗೆ ಇಷ್ಟೊOದು ರಕ್ತ ಹೀನತೆ ಆತಂಕಕಾರಿ. 

ಆಗಾಗ ಮಾತನಾಡುತ್ತಿದ್ದರು, ಮರೆವಿನ ಲಕ್ಷಣಗಳು ಕಾಣಲಿಲ್ಲ. 

ನಾನು ಕೆಲವು ರಕ್ತ ಪರೀಕ್ಷೆಗಳನ್ನು ಬರೆದು, ಖಿನ್ನತೆ ನಿವಾರಣೆಯ ಔಷಧಿ ಗಳನ್ನೂ ಬರೆದು ಕೊಟ್ಟೆ. 

ಎರಡು ದಿನಗಳ ನಂತರ ರಕ್ತದ ಫಲಿತಾ೦ಶವನ್ನು ತಂದು ತೋರಿಸಿದ ಅವರ ಮಗ. ನೋಡಿದರೆ Hb ಬರೇ 5g!! 

ಅಸ್ಥಿ ಮಜ್ಜೆಯ ಖಾಯಿಲೆ ಇರಬಹುದೇ ಎಂದು ನನಗೆ ಸಂಶಯವಾಯಿತು. ಹಾಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಹೋಗಿ ವಿಶದವಾಗಿ ಪರಿಶೋಧಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದೆ. 


ಇನ್ನೂOದೆರಡು ತಿಂಗಳು ಇವರು ನನ್ನನ್ನು ಸಂದಶಿ೯ಸಲು ಬರದಿದ್ದರೂ ನನಗೆ ಆ ಅಜ್ಜನ ನೆನಪು ಆಗಾಗ್ಗೆ ಬರುತ್ತಿತ್ತು. ಹೆಚ್ಚು ಕಮ್ಮಿ ನೋಡಲು ನನ್ನ ದೊಡ್ಡಪ್ಪನOತೆಯೇ ಇದ್ದರು ಎಂಬ ಕಾರಣವಿರಬಹುದೇನೋ! ಅಥವಾ ಅವರ ತೀವ್ರ ರಕ್ತ ಹೀನತೆ ಇರಬಹುದು ನಾನು ನೆನೆಪಿನಲ್ಲಿಟ್ಟುಕೊಳ್ಳುವುದಕ್ಕೆ ಕಾರಣ. ಇದಕ್ಕೆ ವೈದ್ಯ ಶಾಸ್ತ್ರದಲ್ಲಿ counter transference ಎನ್ನುತ್ತಾರೆ. 

ರೋಗಿಗಳೊಡನೆ ವೈಯಕ್ತಿಕ ಸಂಬಂಧವಿಲ್ಲ ದಿದ್ದರೂ ಅವರ ಬಗ್ಗೆ ಭಾವನೆಗಳು ಮೂಡುವುದು, ನನ್ನ ದೊಡ್ಡಪ್ಪನನ್ನು ಈ ಅಪರಿಚಿತ ರೋಗಿಯಲ್ಲಿ ಕಾಣುವoತೆ. ದೊಡ್ಡಪ್ಪನಲ್ಲಿ ನನಗಿರುವ ಪ್ರೀತಿ ಇವರಲ್ಲಿ ತೋರಬಹುದು, ಈ counter transference ಕಾರಣ. 

ರೋಗಿಗೂ ವೈದ್ಯರ ಬಗ್ಗೆ ಭಾವನೆಗಳು ಮೂಡುತ್ತವೆ. ಹಲವಾರು ರೋಗಿಗಳು ನನ್ನನ್ನು ಮಗಳೇ (ಮಲಯಾಳದಲ್ಲಿ ಮೋಳೇ) ಎ೦ದು ಸ೦ಬೋಧಿಸುತ್ತಾರೆ ಹಾಗೂ ಭಾವಿಸುತ್ತಾರೆ. ಇದಕ್ಕೆ ವೈದ್ಯ ಶಾಸ್ತ್ರದಲ್ಲಿ transference ಎನ್ನುತ್ತಾರೆ. ರೋಗಿ- ವೈದ್ಯರ ನಡುವಿನ ಈ ಅವಿನಾಭಾವ ಸಂಬಂಧವನ್ನು ರೋಗಿಗೆ ಸಹಾಯ ಮಾಡಲು ಉಪಯೋಗಿಸಬೇಕೆಂದು ಮನೋವೈದ್ಯ ತರಬೇತಿಯ ಪ್ರಧಾನ ಬೋಧನೆ. Some patients get well because they believe their doctor, ಎ೦ದು ಉದ್ಗರಿಸಿದವರು ವೈದ್ಯ ಪಿತಾಮಹ ಹಿಪೋಕ್ರೆಟೀಸ್. Family doctor ಎ೦ದರೆ doctor as part of family ಎ೦ದು ಭಾವಿಸುವ ಕಾಲವು ದುರದೃಷ್ಟವಶಾತ್ ಅವಸಾನಿಸುತ್ತಿದೆ. ಇಷ್ಟು ರೋಗಿಗಳಿಂದ ಮಗಳೆಂದು ಕರೆಸಿಕೊಳ್ಳುವುದು ಧನ್ಯತಾ ಭಾವ ಮೂಡಿಸದೇ ಇರದು.


ಹೀಗೇ ಒ೦ದು ದಿನ ಆ ಮುದುಕರು ನನ್ನನ್ನು ಸಂದಶಿ೯ಸಲು ಬ೦ದರು. ಅವರ ಸುಸ್ತು ಕಡಿಮೆಯಾದಂತೆ ಕಂಡರೂ ಅವರ ಮುಖ ಭಾವ ಮುOಚಿನoತೆಯೇ ಬಾಡಿದೆ. ಮಾತು ಕಡಿಮೆ, ಮOದಹಾಸವಿಲ್ಲ. ಅವರ ಹೆಂಡತಿ ದಪ್ಪ ಫೈಲೊಂದನ್ನು ನನ್ನ ಮೇಜಿನ ಮೇಲಿಟ್ಟರು. ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಅಡ್ಮಿಟ್ ಆಗಿ ಅಲ್ಲಿ ನಡೆದ ರೋಗ ನಿದಾನ ಪರೀಕ್ಷೆಗಳ ಪ್ರಕಾರ ಇವರಿಗೆ ಉಂಟಾದುದು nutritional anemia, anemia in failure ಎ೦ದು, ಅಲ್ಲಿನ ವೈದ್ಯರು ಅನೇಕ ಬಾಟಲಿ ರಕ್ತ, ವಿಟಮಿನ್ ಇOಜೆಕ್ಷನ್, ಟಾನಿಕ್ಗಳಿಂದ ಚಿಕಿತ್ಸೆ ನೀಡಿದ್ದರು. ನನಗೆ ಅಚ್ಚರಿಯ ಜೊತೆ ಸಮಾಧಾನವೂ ಆಯಿತು. ಸದ್ಯ, ಮಾರಕ ರೋಗವಲ್ಲ ಎಂದು. 


ಇವರಿಗೆ ವಿಷಾದ ರೋಗ (Depressive Disorder) ಇದೆಯೆಂದು, ಮತ್ತು ಅದರ ಚಿಕಿತ್ಸೆ ಅತ್ಯವಶ್ಯಕ ಎಂದೂ ಅವರ ಹೆಂಡತಿಗೆ ವಿವರಿಸಿದೆ. ಖಿನ್ನತೆ ನಿವಾರಕ ಮಾತ್ರೆಗಳು, ಟಾನಿಕ್, ಪ್ರೋಟೀನ್ ಪುಡಿಯನ್ನು ಬರೆದು ಕಳುಹಿಸಿದೆ.


 ಮು೦ದಿನ ಸಂದಶ೯ನಕ್ಕೆ ಮಗ ಜೊತೆಗೆ ಬಂದಿದ್ದ. ಖಿನ್ನತೆ ನಿವಾರಕ ಮದ್ದುಗಳನ್ನು ಕೊಟ್ಟರೂ, ಇವರು ಅಕ್ಕಿ ನುಚ್ಚು ಗOಜಿಯನ್ನು ಮಾತ್ರ ಕುಡಿಯುತ್ತಿದ್ದರು. ಮೊಟ್ಟೆ, ಮೀನು, ಮಾಂಸಾಹಾರವನ್ನು ತಿರಸ್ಕರಿಸುತ್ತಿದ್ದರು. ಇವರಿಗೆ ಮತ್ತೆ ರಕ್ತ ಹೀನತೆ ಆಗುವ ಸಾಧ್ಯತೆ ಇಲ್ಲದಲ್ಲ ಎಂದು ನನಗೆ ಖಚಿತವಾಯಿತು. "ನಿಮ್ಮನ್ನು ಅಡ್ಮಿಟ್ ಮಾಡಿ ಚಿಕಿತ್ಸೆ ಮಾಡಲೇ, ಅಚ್ಚಾ" ಎಂದೆ. ತಕ್ಷಣ ಅವರು, " ಅಯ್ಯೋ ಬೇಡ ಡಾಕ್ಟರೇ, ನಾನು ಮನೆಯಲ್ಲಿ ಊಟ ಮಾಡುತ್ತೇನೆ ಬಿಡಿ" ಎಂದರು. " ಹೊಟ್ಟೆಗೆ ಊಟ ಮಾತ್ರವಲ್ಲ, ದುಡ್ಡಿನ ಸಮಸ್ಯೆಯನ್ನು ನಿಮ್ಮ ಮಗ ನೋಡಿಕೊಳ್ಳುತ್ತಾನೆ೦ಬ ಭರವಸೆಯೂ ಬೇಕು" ಎಂದೆ. ಅವರ ಹೆಂಡತಿ ಅಹುದಹುದೆಂದು ತಲೆಯಾಡಿಸಿ ನನ್ನ ಸಲಹೆಗೆ ಬೆಂಬಲ ನೀಡಿದರು. ರೋಗಿಯ ಕುಟುಂಬದ ಸಹಕಾರ ಇಲ್ಲದೆ ವೈದ್ಯರು ರೋಗಿಗೆ ಸಹಾಯ ಮಾಡುವುದು ಕಷ್ಟಸಾಧ್ಯ. 


ಫಾದರ್ ಮುಲ್ಲರ್ ಕಾಲೇಜಿನಲ್ಲಿ ನಾನು ಓದುತ್ತಿರುವಾಗ ನಮ್ಮ ಪ್ರೊಫೆಸರರಾದ ಡಾ|| ಜಾನ್ ಮಥಾಯಿ ಹೇಳಿದ್ದು ನೆನಪಾಯಿತು. ಎಷ್ಟೇ ಒಳ್ಳೆಯ ಶುಶ್ರೂಷೆ ಆಸ್ಪತ್ರೆಯಲ್ಲಿ ನೀಡಿದರೂ ರೋಗಿಯ ಮನ ಮನೆಯನ್ನು ಹಂಬಲಿಸುತ್ತದೆ ಎಂದು ಸರ್ ನಮಗೆ ಹೇಳುತ್ತಿದ್ದರು. ಅಲ್ಲಿ ತೀವ್ರತರವಾದ ಮಾನಸಿಕ ರೋಗ ಬಾಧಿಸಿರುವ ವ್ಯಕ್ತಿಗಳು ಕೂಡಾ rounds ಸಮಯದಲ್ಲಿ ಬೇರೇನೂ ಮಾತನಾಡದೇ ಇದ್ದರೂ, ಮನೆಗೆ ಕಳುಹಿಸಿಕೊಡಬೇ೦ದು ನಿವೇದಿಸುತ್ತಿದ್ದರು. 


ಮು೦ದಿನ ಸಂದಶ೯ನದಲ್ಲಿ ಹೆಂಡತಿ ಮುಸುಮುಸು ನಗುತ್ತಾ ಹೇಳಿದ್ದು ಇದು. ಅಡ್ಮಿಶನ್ ಭಯಕ್ಕೆ ಕಳೆದ ಬಾರಿ opD ಇಂದ ಹೊರಬಿದ್ದಾಕ್ಷಣ ಹೆಂಡತಿಯ ಆದೇಶದಂತೆ ಎದುರಿಗಿದ್ದ ಹೋಟೆಲಿನಲ್ಲಿ ಚಿಕನ್ ಬಿರಿಯಾನಿ ತಿಂದು ಮರಳಿದರಂತೆ!! ಹೀಗೆ ಮನೆಗೆ ಹೋಗಿ ಅಲ್ಲಿ ಎಲ್ಲಾ ವಿಧದ ಹಣ್ಣು ತರಕಾರಿ, ಮೀನು, ಮಾಂಸ ಎಲ್ಲವನ್ನು ಮುಂಚಿನ ಥರ ತಿನ್ನುವುದಕ್ಕೆ ಆರಂಭಿಸಿದ್ದರು. ಕಳೆದ ತಿಂಗಳಿನಿಂದ ಪೇಟೆಗೆ ಹೋಗಿ ಸಾಮಾನನ್ನು ಖರೀದಿಸಿ ಬರುವಾಗ ಹಳೇ ಮಿತ್ರರೊಬ್ಬರು ಸಿಕ್ಕು ಅಚ್ಚರಿ ಪಟ್ಟ ರಂತೆ. ಭಾನುವಾರದ ಚಚ್೯ ಪ್ರಾಥ೯ನೆಗೆ ಸುಮಾರು ಒಂದು ವಷ೯ದ ನಂತರ ತೆರಳಿದಾಗ, ಬಂಧುವೊಬ್ಬರು ಬಿಗಿದಪ್ಪಿ ಆನಂದ ಭಾಷ್ಪ ಸುರಿಸಿದರಂತೆ. ವಾಸಿಯಾಗದ ಮಾನಸಿಕ ರೋಗವಿದೆಯೆಂದು ಭಾವಿಸಿದ್ದ ಹಲವರು ಸ೦ತಸ ಪಟ್ಟರ0ತೆ. 


ಇದನ್ನು ಸಂತೋಷದಿಂದ ನಾನು ಕೇಳುತ್ತಿದ್ದೆ. ಅವರ ಹೆಂಡತಿ ಇದ್ದಕ್ಕಿದ್ದ ಹಾಗೆ ನನ್ನ ಎರಡೂ ಕೈಗಳನ್ನು ಹಿಡಿದು ಕಣ್ಣಿೀರು ಸುರಿಸುತ್ತಾ ಕೃತಜ್ಞತೆ ತೋರಿಸಿದರು. 

ಅಂತೂ ಇಂತೂ ಅಜ್ಜ ಮುOಚಿನ0ತಾದರು. ಅವರ ತಟ್ಟೆಯಲ್ಲಿ ಕುಸುಬಲಕ್ಕಿಯ ಜೊತೆಗೆ ಮೀನನ್ನು ,ತರಕಾರಿಯನ್ನು ಸೇರಿಸಿದ ಶ್ರೇಯಸ್ಸು ನನ್ನದಲ್ಲದ್ದಾದರೂ ನನಗೆ ದೊರೆಯಿತು!!


Dr.Vasudha Rao

Psychiatrist







ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು