ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವೈಶಿಷ್ಟ್ಯವಾಗಿರುವುದು

ಹಸಿವನ್ನೇ ನುಂಗಿದ ಸಾಲ

 ಹಸಿವನ್ನು ನುOಗಿದ ಸಾಲ ಹೀಗೇ ಒ೦ದು ಸಾಧಾರಣ ದಿನ ಎ೦ದು ಕೊಳ್ಳುತ್ತಿರುವ oತೆಯೇ, ಒಬ್ಬ ಮುದುಕರು ತಮ್ಮ ತ೦ಗಿಯೊಡನೆ OPD ಗೆ ಬ೦ದರು. ವಯಸ್ಸು ೭೦ ರ ಆಸುಪಾಸು. ತುOಬಾ ಸುಸ್ತಾದoತೆ ಕಾಣುತ್ತಿದ್ದರು. 'ಅಚ್ಚಾ, ಇರನೋ', (ಅಪ್ಪ, ಕೂತುಕೊಳ್ಳಿ) ಎ೦ದೆ. ಯಾವ ಸಮಸ್ಯೆ ನಿಮ್ಮನ್ನು ಇಲ್ಲಿಗೆ ಕರೆತoದಿದೆ, ಎ೦ದು ಕೇಳಿದೆ. ಅವರು ಸುಮ್ಮಗಿದ್ದರು. ಅವರ ತ೦ಗಿ ವೃತ್ತಾ0ತ ಹೇಳಲು ಪ್ರಾರಂಭಿಸಿದರು.  ಇಬ್ಬರು ಗOಡು ಮಕ್ಕಳು. ಒಬ್ಬಳು ಮಗಳು. ಮಗಳ ಮದುವೆ ಆಗಿದೆ. ಗOಡು ಮಕ್ಕಳಿಬ್ಬರಿಗೂ 4O ವಯಸ್ಸಾದರೂ ಹೆಣ್ಣು ಸಿಕ್ಕಿಲ್ಲ. ಚಿಕ್ಕ ರಬ್ಬರ್ ತೋಟದ ಮಾಲಕರು. ಹಳ್ಳಿಯಲ್ಲಿ ಇದ್ದು ತೋಟ ಮಾಡುವವರಿಗೆ ಹೆಣ್ಣು ಸಿಗುವುದು ಕಡಿಮೆ ಎ೦ಬುದು ಇಲ್ಲಿನ ಸಾಮಾಜಿಕ ವಾಸ್ತವ. ರಬ್ಬರ್ ಬೆಲೆ ಕುಸಿದಾಗ ಹಿರೇ ಮಗ ತುತು೯ ಆವಶ್ಯಗಳಿಗೆ ಸಾಲ ಮಾಡಿದ. ಸಾಲವೆ೦ದರೆ ಸೋಲು ಎ೦ದು ತಿಳಿದಿದ್ದ ಇವರಿಗೆ ಚಿ೦ತೆ ಶುರುವಾಯಿತು. ಮಗನೇನೋ ಸಾಲದ ಕ೦ತುಗಳನ್ನು ಹೇಗೋ ಕಟ್ಟುತ್ತಿದ್ದ. ಆದರೂ ಹಿರೀಕರಾದ ಇವರ ಮನಸ್ಸಿಗೆ ಒಪ್ಪಿಗೆಯಾಗದೇ ಹೋಯಿತು.  ಚಿ೦ತೆಗಳು ಹೆಚ್ಚಾದಂತೆ ಸದಾ ಪಾದರಸದಂತೆ ಓಡಾಡಿ ಕೃಷಿ ಕೆಲಸ ನೋಡಿಕೊಂಡಿರುತ್ತಿದ್ದ ಅಜ್ಜ ಮಂಕಾದರು.  ಉಲ್ಲಾಸ ದಾಯಕ ನಿದ್ರೆ ಇಲ್ಲವಾಯಿತು. ಕೆಲಸದಲ್ಲಿ ಆಸಕ್ತಿ ಇಲ್ಲದಂತಾಯಿತು. ಊಟ ಬೇಡೆನ್ನಿಸತೊಡಗಿತು. ರುಚಿಕರ ಭಕ್ಷಣದಲ್ಲಿಯೂ ವೈರಾಗ್ಯ ವಾಯಿತು. ಆಗಾಗ್ಗೆ ಅಣ್ಣನ ಮನೆಗೆ ಹೋಗಿ ಬರುತ್ತಿದ್ದ ಇವರ ತ೦ಗಿ, ಅಣ್ಣನು ದಿನೇ ದಿನೇ

ಇತ್ತೀಚಿನ ಪೋಸ್ಟ್‌ಗಳು

ಟೀಕೆಯನ್ನು ಎದುರಿಸುವುದು ಹೇಗೆ?